ಮುಖ್ಯಾಂಶಗಳು;-

“ಪ್ರತಿಮೆ ಮರುಸ್ಥಾಪಿಸಿ, ಇಲ್ಲದಿದ್ದರೆ ಪಾದಯಾತ್ರೆ!” ಸಿದ್ದು ಅಭಿಮಾನಿಗಳ ಎಚ್ಚರಿಕೆ
ಕಲಬುರಗಿಯಲ್ಲಿ ಸಿದ್ದು ಪ್ರತಿಮೆ ತೆರವು; ನಂಜನಗೂಡಿನಲ್ಲಿ ಅಭಿಮಾನಿಗಳ ಪ್ರತಿಭಟನೆ!
ನಂಜನಗೂಡಿನಿಂದ ಕಲಬುರಗಿಗೆ ಪಾದಯಾತ್ರೆ ಘೋಷಣೆ—ಅಭಿಮಾನಿಗಳ ಬೇಡಿಕೆ ಏನು?
ಸಿದ್ದರಾಮಯ್ಯ ಪ್ರತಿಮೆ ವಿವಾದ: ಅದೇ ಜಾಗದಲ್ಲಿ ಮರುಸ್ಥಾಪನೆಗೆ ಒತ್ತಾಯ!

 

ಸಿದ್ದರಾಮಯ್ಯ ಪ್ರತಿಮೆಯನ್ನು ಮತ್ತೆ ಅದೇ ಸ್ಥಳದಲ್ಲಿ ಸ್ಥಾಪಿಸಿ; ಇಲ್ಲದಿದ್ದರೆ ನಂಜನಗೂಡಿನಿಂದ ಕಲಬುರಗಿಗೆ ಪಾದಯಾತ್ರೆ ನಡೆಸುತ್ತೇವೆ!” ಎಂದು ಸಿದ್ದರಾಮಯ್ಯ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ರಾತ್ರೋರಾತ್ರಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮಹಾನಗರ ಪಾಲಿಕೆ ತೆರವುಗೊಳಿಸಿತ್ತು. ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿರಲಿಲ್ಲ ಎಂಬುದು ಪಾಲಿಕೆ ನೀಡಿದ ಕಾರಣ.

ತೆರವು ಕ್ರಮವನ್ನು ವಿರೋಧಿಸಿ ನಂಜನಗೂಡಿನ ಹುಲ್ಲಳ್ಳಿ ಸರ್ಕಲ್‌ನಲ್ಲಿ ಡಾ. ಎಸ್. ಯತೀಂದ್ರ ಸಿದ್ದರಾಮಯ್ಯ ಫೌಂಡೇಶನ್ ನೇತೃತ್ವದಲ್ಲಿ ಅಭಿಮಾನಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು. ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪ್ರತಿಮೆಯನ್ನು ಹಿಂದಿನ ಸ್ಥಳದಲ್ಲೇ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರದಿದ್ದರೆ ನಂಜನಗೂಡಿನಿಂದ ಕಲಬುರಗಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.