ಮುಖ್ಯಾಂಶಗಳು;- ‘ಮಸ್ತ್ ಮಲೈಕಾ’ ಬಳಿಕ ‘ಸುಲೋಚನ’ ಹಾಡಿದ ಸಾನ್ವಿ! ಜೇಸನ್ ಸಂಜಯ್ ಚೊಚ್ಚಲ ಚಿತ್ರದಲ್ಲಿ ಕನ್ನಡದ ಸಾನ್ವಿ ಗಾಯನ! ಕಾಲಿವುಡ್ನಲ್ಲೂ ಕೇಳಿಬಂತು ಸಾನ್ವಿ ಸುದೀಪ್ ಕಂಠ! ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ಸಿಗ್ಮಾ. ಈ ಚಿತ್ರದ ‘ಸುಲೋಚನ’ ಹಾಡಿಗೆ ಸಾನ್ವಿ ಧ್ವನಿಯಾಗಿದ್ದಾರೆ. ಹಾಡಿಗೆ ಎಸ್. ಥಮನ್ ಸಂಗೀತ ನೀಡಿದ್ದಾರೆ. ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡಿನ ಬಳಿಕ ಸಾನ್ವಿಯ ಈ ಹೊಸ ಹಾಡು ಗಮನ ಸೆಳೆಯುತ್ತಿದೆ. ಸಿಗ್ಮಾ ಚಿತ್ರದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಗಾಯಕಿಯ ಧ್ವನಿ, ವಿಜಯ್ ಪುತ್ರನ ನಿರ್ದೇಶನದ ತಮಿಳು ಚಿತ್ರದಲ್ಲಿ ಕೇಳಿಬಂದಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. Post navigation ಸಿದ್ದು ಅಭಿಮಾನಿಗಳ ಎಚ್ಚರಿಕೆ..! ಸೆ.28ಕ್ಕೆ ಪ್ರದೋಶ್ ಸಾಕ್ಷ್ಯ: ದರ್ಶನ್ ಪ್ರಕರಣಕ್ಕೆ ಮಹತ್ವದ ದಿನ..!