ಮುಖ್ಯಾಂಶಗಳು: – ₹7,000 ಕೋಟಿ ಪರಿಹಾರ ಕೇಳಿದ ಊರ್ವಶಿ..! – ಅನುಮತಿಯಿಲ್ಲದೆ ಹೆಸರು–ಫೋಟೋ ಬಳಕೆ ಆರೋಪ: ಕೋರ್ಟ್ ಮೊರೆ ಹೋದ ಊರ್ವಶಿ – ಅಮೆರಿಕದ ಎಐ ಸಂಸ್ಥೆ ವಿರುದ್ಧ ಊರ್ವಶಿ ಕಾನೂನು ಸಮರ! – ಊರ್ವಶಿ ಗುರುತು ದುರ್ಬಳಕೆ ಆರೋಪ: ₹7,000 ಕೋಟಿ ಪರಿಹಾರಕ್ಕೆ ಬೇಡಿಕೆ – ಎಐ ಬಳಕೆಗೆ ಅನುಮತಿ ಬೇಕೇ? ಊರ್ವಶಿ ದಾವೆಯಿಂದ ಮತ್ತೆ ಚರ್ಚೆ ಏಳು ಸಾವಿರ ಕೋಟಿ ರೂಪಾಯಿ ಪರಿಹಾರ ಕೊಡಿ! ಅಮೆರಿಕದ ಎಐ ಕಂಪನಿಯೊಂದರ ವಿರುದ್ಧ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕಾನೂನು ಸಮರಕ್ಕಿಳಿದಿದ್ದಾರೆ . ಲಾಸ್ ಎಂಜಲೀಸ್ ಮೂಲದ ಸಂಸ್ಥೆಯೊಂದು ತಮ್ಮ ಅನುಮತಿಯಿಲ್ಲದೆ ಹೆಸರು, ಫೋಟೋ ಹಾಗೂ ವಿಡಿಯೋಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದೆ ಎಂಬುದು ನಟಿಯ ಆರೋಪ. ಈ ಹಿನ್ನೆಲೆಯಲ್ಲಿ ಅವರು ಏಳು ಸಾವಿರ ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ದಾವೆ ಹೂಡಿದ್ದಾರೆ. ಸ್ವಂತ ಬ್ರ್ಯಾಂಡ್ ಬೆಳೆಸಿಕೊಳ್ಳಿ, ಆದರೆ ಅನುಮತಿಯಿಲ್ಲದೆ ಊರ್ವಶಿ ಅವರ ಗುರುತನ್ನು ಬಳಸಬೇಡಿ ಎಂದು ನಟಿಯ ತಂಡ ಎಚ್ಚರಿಸಿದೆ. ಈ ಪ್ರಕರಣ ವ್ಯಕ್ತಿತ್ವ ಹಕ್ಕುಗಳು ಹಾಗೂ ಎಐ ತಂತ್ರಜ್ಞಾನದ ದುರ್ಬಳಕೆ ಕುರಿತ ಚರ್ಚೆಗೆ ಕಾರಣವಾಗಿದೆ. ತಾರೆಯರ ಹೆಸರು ಮತ್ತು ಚಿತ್ರಗಳನ್ನು ವಾಣಿಜ್ಯವಾಗಿ ಬಳಸುವಾಗ ಅನುಮತಿಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. Post navigation ಆರ್ಟಿಒ ಹುದ್ದೆಗೆ ₹2 ಕೋಟಿ? ಕನ್ನಾಳೆ ಡೈರಿಯಲ್ಲಿ ಹಣದ ಲೆಕ್ಕ! ಕಾಲೇಜು ಬಳಿ ಮಾರಾಮಾರಿ! 19 ವರ್ಷದ ವಿದ್ಯಾರ್ಥಿ ಹ*