ಮುಖ್ಯಾಂಶಗಳು: ಪಟ್ಟಣಗೆರೆ ಶೆಡ್ನಲ್ಲಿ ನಡೆದಿದ್ದೇನು? ನ್ಯಾಯಾಲಯದಲ್ಲಿ ಪ್ರದೋಶ್ ಹೇಳಿಕೆ ದರ್ಶನ್ ವಿರುದ್ಧ ಪ್ರದೋಶ್ ಸಾಕ್ಷ್ಯದಲ್ಲಿ ಗಂಭೀರ ಆರೋಪ ಮಾಫಿ ಸಾಕ್ಷಿ ಸ್ಥಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್ ಪರ ವಕೀಲರು ಪ್ರದೋಶ್ ಸಾಕ್ಷ್ಯ ಮುಂದುವರಿಕೆ; ರೇಣುಕಾಸ್ವಾಮಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಕಾನೂನು ಬೆಳವಣಿಗೆಯಾಗಿದೆ. ಪ್ರಕರಣದ ಆರೋಪಿ ಆಗಿರುವ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದ ಮುಂದೆ ಸಾಕ್ಷಿ ದಾಖಲಿಸಿದ್ದಾರೆ. ಪ್ರದೋಶ್ ಅವರ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ಇನ್ನಿಲ್ಲದ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಿಲ್ಲ, ನಿನ್ನೆ ನ್ಯಾಯಾಲಯದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಾಕ್ಷ್ಯ ನುಡಿದಿದ್ದು, ಪ್ರಕರಣದ ಭೀಕರತೆಯನ್ನು ವಿವರಿಸಿದ್ದಾರೆ. ಆರ್ಆರ್ ನಗರದ ಸ್ಟೋನಿ ಬ್ರೂಕ್ನಲ್ಲಿ ಪ್ರದೋಶ್, ವಿನಯ್, ದರ್ಶನ್, ಚಿಕ್ಕಣ್ಣ ಇನ್ನಿತರರ ನಡುವೆ ನಡೆದ ಸಭೆಯಿಂದ ಆರಂಭಗೊಂಡು, ಪಟ್ಟಣಗೆರೆ ಶೆಡ್ನಲ್ಲಿ ನಡೆದ ಘಟನೆಗಳ ವರೆಗೆ ಅಂದು ನಡೆದ ಪ್ರತಿಯೊಂದು ಕೃತ್ಯವನ್ನು ಪ್ರದೋಷ್ ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಶೇಷವಾಗಿ ದರ್ಶನ್ ಹಾಗೂ ಇನ್ನೂ ಕೆಲವರು ರೇಣುಕಾ ಸ್ವಾಮಿ ಮೇಲೆ ಎಸಗಿದ ಅಮಾನವೀಯ ಹಲ್ಲೆ, ರೇಣುಕಾ ಸ್ವಾಮಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಮಾಡಿದ ಸಂದೇಶದಿಂದಾಗಿ ತೀವ್ರ ಸಿಟ್ಟಿನಲ್ಲಿದ್ದ ದರ್ಶನ್, ಪಟ್ಟಣಗೆರೆ ಶೆಡ್ನಲ್ಲಿ ಹಲವಾರು ಬಾರಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರದೋಶ್ ಹೇಳಿದ್ದಾರೆ. ಪವಿತ್ರಾ ಗೌಡ ಸಹ ಚಪ್ಪಲಿಯಲ್ಲಿ ರೇಣುಕಾ ಸ್ವಾಮಿ ಕೆನ್ನೆಗೆ ಹೊಡೆದ ವಿಷಯ. ರೇಣುಕಾ ಸ್ವಾಮಿ ಪವಿತ್ರಾ ಗೌಡ ಮತ್ತು ದರ್ಶನ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಷಯಗಳನ್ನು ಅಂದು ನಡೆದಂತೆ ನ್ಯಾಯಾಲಯದ ಮುಂದೆ ಪ್ರದೋಶ್ ವಿವರಿಸಿದ್ದಾರೆ. ರೇಣುಕಾ ಸ್ವಾಮಿಯ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ, ಅವನ ಮೇಲೆ ಉಗುಳಿ, ಅವನ ಮರ್ಮಾಂಗಕ್ಕೆ ದರ್ಶನ್ ಒದ್ದಿದ್ದಾಗಿ ಪ್ರದೋಶ್ ಹೇಳಿದ್ದಾರೆ. ದರ್ಶನ್ ಮಾತ್ರವೇ ಅಲ್ಲದೆ ಪವನ್, ನಂದೀಶ್, ರಾಘವೇಂದ್ರ, ವಿನಯ್ ಇನ್ನೂ ಹಲವರು ರೇಣುಕಾ ಸ್ವಾಮಿ ಮೇಲೆ ವಿಧ-ವಿಧವಾಗಿ ಹಲ್ಲೆ ಮಾಡಿದ್ದನ್ನು ಪ್ರದೋಶ್ ಅತ್ಯಂತ ವಿವರವಾಗಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ನಿನ್ನೆ ಸುಮಾರು ಮೂರು ಗಂಟೆಗಳ ಕಾಲ ಪ್ರದೋಶ್ ಸಾಕ್ಷ್ಯ ಹೇಳಿದ್ದು, ಇಂದು ಸಹ ಪ್ರದೋಶ್ ಅವರ ಸಾಕ್ಷ್ಯ ಹೇಳಿಕೆ ಮುಂದುವರೆಯಲಿದೆ. Post navigation ನೆನ್ನೆ ಆನೆ.. ಇಂದು ಚಿರತೆ.. ಬೆಚ್ಚಿಬಿತ್ತು ಬೆಂಗಳೂರು! FBI ಟಾಪ್ 10 ಪಟ್ಟಿಗೆ ಗೋಲ್ಡಿ ಬ್ರಾರ್!