ಮುಖ್ಯಾಂಶಗಳು: ಕಾಕ್ಪಿಟ್ನಲ್ಲೇ ಇರಿತ..! 174 ಪ್ರಯಾಣಿಕರು ಪಾರು! ಗಾಯಗೊಂಡರೂ ಧೈರ್ಯ ಬಿಟ್ಟುಕೊಡದ ಭಾರತೀಯ ಕ್ಯಾಪ್ಟನ್..! ಮಧ್ಯ ಆಕಾಶದಲ್ಲಿ ಪೈಲಟ್ ಮೇಲೆ ದಾಳಿ..! ತಪ್ಪಿದ ಭೀಕರ ದುರಂತ! ಫ್ಲೈದುಬೈ ವಿಮಾನದಲ್ಲಿ ಆತಂಕ..! ಕ್ಯಾಪ್ಟನ್–ಪ್ರಯಾಣಿಕರ ಸಾಹಸ! ಕಾಕ್ಪಿಟ್ನಲ್ಲಿ ದಾಳಿ… ತಬೂಕ್ನಲ್ಲಿ ಸುರಕ್ಷಿತ ತುರ್ತು ಭೂಸ್ಪರ್ಶ! ಮಧ್ಯ ಆಕಾಶದಲ್ಲಿ ಹಾರುತ್ತಿದ್ದ ವಿಮಾನ… ಕಾಕ್ಪಿಟ್ನಲ್ಲೇ ಕ್ಯಾಪ್ಟನ್ ಮೇಲೆ ದಾಳಿ! ಆದರೂ ತಪ್ಪಿತು ಭೀಕರ ದುರಂತ! ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಸಹಪೈಲಟ್ ಇರಿದಿದ್ದಾನೆ . ವಿಮಾನದಲ್ಲಿದ್ದ 174 ಪ್ರಯಾಣಿಕರ ಸುರಕ್ಷತೆ ಕ್ಷಣಾರ್ಧದಲ್ಲಿ ಅಪಾಯಕ್ಕೆ ಸಿಲುಕಿತ್ತು! ಗಾಯಗೊಂಡಿದ್ದರೂ ಕ್ಯಾಪ್ಟನ್ ಕಾಕ್ಪಿಟ್ ಬಾಗಿಲು ತೆರೆದರು. ಇದರಿಂದ ಒಳಗೆ ಪ್ರವೇಶಿಸಿದ ಪ್ರಯಾಣಿಕರು ಮತ್ತು ಸಿಬ್ಬಂದಿ, ದಾಳಿಕೋರನನ್ನು ನಿಯಂತ್ರಿಸಲು ನೆರವಾದರು. ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ಗೆ ತಿರುಗಿಸಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿದ್ದು, ದೊಡ್ಡ ದುರಂತ ತಪ್ಪಿದೆ. ಕ್ಯಾಪ್ಟನ್ ಮಚ್ಚರ್ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಸಂಕಷ್ಟದ ಸಮಯದಲ್ಲಿ ನೆರವಾದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸಾಹಸವೂ ಪ್ರಶಂಸೆಗೆ ಪಾತ್ರವಾಗಿದೆ. ದಾಳಿ ಏಕೆ ನಡೆಯಿತು? ಕಾಕ್ಪಿಟ್ನಲ್ಲಿ ನಿಜಕ್ಕೂ ಏನಾಯಿತು? ತನಿಖೆ ಮುಂದುವರಿದಿದೆ. ಅಪಾಯದ ಕ್ಷಣದಲ್ಲಿ ತೋರಿದ ಧೈರ್ಯ ಮತ್ತು ಒಗ್ಗಟ್ಟು… ನೂರಾರು ಜೀವಗಳ ರಕ್ಷಣೆಗೆ ನೆರವಾಯಿತು!ರಾಷ್ಟ್ರಪತಿ ಅವರಿಂದ ಪ್ರಧಾನಮಂತ್ರಿಯವರೆಗೂ ಅನೇಕ ಗಣ್ಯರು ಪೈಲೆಟ್ ಸಾಹಸವನ್ನು ಪ್ರಶಂಸಿದ್ದಾರೆ. Post navigation ₹21.68 ಲಕ್ಷ ಖೋಟಾ ನೋಟು..! 7 ಮಂದಿ ಅರೆಸ್ಟ್! ಕೊನೆಯ ಬಾಣದಲ್ಲಿ 10..! ಭಾರತಕ್ಕೆ ಐತಿಹಾಸಿಕ ಚಿನ್ನ!