ಮುಖ್ಯಾಂಶಗಳು:- – ತಾಂಡವ್ ರಾಮ್ ಎಲಿಮಿನೇಟ್; ಬಿಗ್ ಬಾಸ್ ಮನೆಯಲ್ಲಿ ಮತ್ತೆ ಟ್ವಿಸ್ಟ್? – ತಾಂಡವ್ ರಾಮ್ ಕಂಬ್ಯಾಕ್ ಮಾಡ್ತಾರಾ? ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಚರ್ಚೆ – ವೋಟಿಂಗ್ ಲೆಕ್ಕಾಚಾರ ಬದಲು; ತಾಂಡವ್ ಎಲಿಮಿನೇಷನ್ಗೆ ವೀಕ್ಷಕರ ಅಸಮಾಧಾನ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮೂರನೇ ವಾರವೇ ಅನಿರೀಕ್ಷಿತ ತಿರುವು ಎದುರಾಗಿದೆ. ವೋಟಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆಯಾದ ಬಳಿಕ ತಾಂಡವ್ ರಾಮ್ ಎಲಿಮಿನೇಟ್ ಆಗಿದ್ದಾರೆ. ಈ ನಿರ್ಧಾರಕ್ಕೆ ಕೆಲವು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ತಾಂಡವ್ ಮತ್ತೆ ಮನೆಗೆ ಬರಬಹುದೇ? ಎಂಬ ಚರ್ಚೆ ಶುರುವಾಗಿದೆ. ಈ ವಾರ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದು, ಅವರೊಂದಿಗೆ ತಾಂಡವ್ ಕೂಡ ಮರಳಬಹುದು ಎಂಬ ಊಹಾಪೋಹ ಕೇಳಿಬರುತ್ತಿದೆ. ಆದರೆ ತಾಂಡವ್ ಕಂಬ್ಯಾಕ್ ಅಥವಾ ವೈಲ್ಡ್ ಕಾರ್ಡ್ ಪ್ರವೇಶದ ಬಗ್ಗೆ ಕಾರ್ಯಕ್ರಮದಿಂದ ಅಧಿಕೃತ ಘೋಷಣೆ ಆಗಿಲ್ಲ. ಮುಂದಿನ ಸಂಚಿಕೆಗಳಲ್ಲಿ ಈ ಕುತೂಹಲಕ್ಕೆ ಉತ್ತರ ಸಿಗಲಿದೆ. Post navigation ಚಾಮರಾಜನಗರದಲ್ಲಿ ಬಿಜೆಪಿ ಶವಯಾತ್ರೆ ಪ್ರತಿಭಟನೆ..! ಮೇವು ಕಿಟ್ಗಳಿಗೆ ₹25 ಕೋಟಿ ಅನುದಾನ ಬಿಡುಗಡೆ..!