ಮುಖ್ಯಾಂಶಗಳು:- ಚಿನ್ನ ಗೆದ್ದ ಟೀಂ ಇಂಡಿಯಾ ಆಟಗಾರ್ತಿಗೆ ₹75 ಲಕ್ಷ ಬಹುಮಾನ! ಏಷ್ಯನ್ ಗೇಮ್ಸ್ ಚಿನ್ನ: ಜಿ. ಕಮಲಿನಿಗೆ ಸಿಎಂ ವಿಜಯ್ ಬಂಪರ್ ಬಹುಮಾನ ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಕಮಲಿನಿಗೆ ₹75 ಲಕ್ಷ ಘೋಷಣೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದಿದೆ! ಫೈನಲ್ನಲ್ಲಿ ಶ್ರೀಲಂಕಾವನ್ನು 147 ರನ್ಗಳಿಂದ ಸೋಲಿಸಿದ ಭಾರತಕ್ಕೆ, ಈ ಬಾರಿಯ ಕ್ರೀಡಾಕೂಟದಲ್ಲಿ ಇದು ಮೊದಲ ಚಿನ್ನ. ಆದರೆ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ನಲ್ಲಿ ಭಾರತಕ್ಕೆ ಇದು ಸತತ ಎರಡನೇ ಚಿನ್ನ. ಈ ಗೆಲುವಿನ ಬೆನ್ನಲ್ಲೇ ತಂಡದ ಸದಸ್ಯೆ, ತಮಿಳುನಾಡಿನ ಮಧುರೈ ಮೂಲದ ಜಿ. ಕಮಲಿನಿ ಅವರಿಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ₹75 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಕಮಲಿನಿ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದು ವಿಜಯ್ ಅಭಿನಂದಿಸಿದ್ದಾರೆ. Post navigation ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಗೌರವ..!