ಮುಖ್ಯಾಂಶಗಳು:- ಗಣೇಶ ಮೂರ್ತಿಗೆ ಮಣ್ಣು ತರಲು ಹೋದ ಇಬ್ಬರು ಬಾಲಕರು ನೀರಿನ ಗುಂಡಿಗೆ ಬ* ಕನಕಪುರದಲ್ಲಿ ದುರಂತ: ಮಧು, ಶ್ರೀಹರಿ ನೀರಿನಲ್ಲಿ ಮುಳುಗಿ ಸಾ* ಮಣ್ಣು ಸಂಗ್ರಹಿಸಲು ಹೋದ ಮಕ್ಕಳು ಮರಳಲಿಲ್ಲ; ಗುಳಗನಹಳ್ಳಿಯಲ್ಲಿ ಶೋಕ ಗಣೇಶನ ಮೂರ್ತಿ ಮಾಡಲು ಜೇಡಿ ಮಣ್ಣು ತರಲು ತೆರಳಿದ್ದ ಇಬ್ಬರು ಬಾಲಕರು ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿರುವ ದುರಂತ ಕನಕಪುರ ತಾಲೂಕಿನ ಗುಳಗನಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು 12 ವರ್ಷದ ಮಧು ಮತ್ತು 7 ವರ್ಷದ ಶ್ರೀಹರಿ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಇಬ್ಬರೂ ಮೇಘನಾ ಎಂಬ ಬಾಲಕಿಯೊಂದಿಗೆ ಗ್ರಾಮದ ಸಮೀಪ ಮಣ್ಣು ಸಂಗ್ರಹಿಸಲು ತೆರಳಿದ್ದರು. ಆ ವೇಳೆ ಮಧು ಮತ್ತು ಶ್ರೀಹರಿ ಪಕ್ಕದಲ್ಲಿದ್ದ ನೀರಿನ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ. ಮೇಘನಾ ಗ್ರಾಮಕ್ಕೆ ಓಡಿ ಹೋಗಿ ವಿಷಯ ತಿಳಿಸಿದ ಬಳಿಕ ಪೋಷಕರು ಮತ್ತು ಗ್ರಾಮಸ್ಥರು ಶೋಧ ಆರಂಭಿಸಿದರು. ಸ್ಥಳೀಯ ಈಜುಗಾರರು ಇಬ್ಬರು ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರತೆಗೆದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರಿಕಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಈ ಘಟನೆ ತುಂಬಲಾರದ ನಷ್ಟ. ತೆರೆದ ನೀರಿನ ಗುಂಡಿಗಳ ಸುರಕ್ಷತೆಯ ಬಗ್ಗೆಯೂ ಈ ದುರಂತ ಪ್ರಶ್ನೆ ಎತ್ತಿದೆ. Post navigation ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಗೌರವ..! 34 ದಿನಕ್ಕೆ ₹2.21 ಕೋಟಿ..! ಮಾದಪ್ಪನ ಹುಂಡಿಯಲ್ಲಿ ಏನೇನಿದೆ?