ಮುಖ್ಯಾಂಶಗಳು:- ರೈತರ ಪರ ಎಚ್ಡಿಕೆ ಆಕ್ರೋಶ,ಬಿಡದಿ ರೈತರ ಪ್ರತಿಭಟನೆ ‘ಪಾಪದ ಕೊಡ ತುಂಬುತ್ತಿದೆ’ ಎಂದ ಕುಮಾರಸ್ವಾಮಿ… ಪೆಂಡಾಲ್ಗೆ ತಡೆ ಆರೋಪ; ರಾಜ್ಯ ಸರ್ಕಾರದ ವಿರುದ್ಧ ಎಚ್ಡಿಕೆ ವಾಗ್ದಾಳಿ..! ಬಿಡದಿ ಭೂಸ್ವಾಧೀನ ವಿವಾದದ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭೈರಮಂಗಲದಲ್ಲಿ ಭೂಮಿ ಉಳಿಸಿಕೊಳ್ಳಲು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಧರಣಿಗೆ ಪೆಂಡಾಲ್ ಹಾಕಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಪ್ರತಿಭಟನಾನಿರತ ರೈತರೊಬ್ಬರು ತಿಳಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ರಾಜ್ಯದಲ್ಲಿರುವುದು ನಾಗರಿಕ ಸರ್ಕಾರವೋ, ರಾಕ್ಷಸ ಸರ್ಕಾರವೋ?” ಎಂದು ಪ್ರಶ್ನಿಸಿದ್ದಾರೆ. ರೈತರನ್ನು ಉರಿಬಿಸಿಲಿನಲ್ಲಿ ಕೂರಿಸುವಂತೆ ಮಾಡಿದ ಪೊಲೀಸರ ವರ್ತನೆ ಅಕ್ಷಮ್ಯ ಎಂದು ಆರೋಪಿಸಿರುವ ಅವರು, “ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ” ಎಂದೂ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂಬುದು ಪ್ರತಿಭಟನಾನಿರತ ರೈತರ ಆಗ್ರಹ. ಈ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಮುಖ್ಯ ಪ್ರಶ್ನೆ. Post navigation ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಗೌರವ..!